ಧ
ಕನ್ನಡ ವರ್ಣಮಾಲೆಯಲ್ಲಿನ ತ ವರ್ಗದ ನಾಲ್ಕನೆಯ ಅಕ್ಷರ, ಮಹಾಪ್ರಾಣ.  ಅಶೋಕನ ಕಾಲದಲ್ಲಿ ಬಲಕ್ಕೆ ಹೊರಭಾಗವನ್ನುಳ್ಳ ಮುಚ್ಚಿರುವ ಅರ್ಧವೃತ್ತದಂತೆ ಇದ್ದ ಈ ಬ್ರಾಹ್ಮೀ ಅಕ್ಷರ ಸಾತವಾಹನರ ಕಾಲದಲ್ಲಿ ಮೊಟ್ಟೆಯಂತೆ  ನಯವಾದ ಮೂಲೆಗಳುಳ್ಳದ್ದಾಗಿ ಕದಂಬರ ಕಾಲಕ್ಕೆ ತಲೆಕಟ್ಟೂ ಹೊಕ್ಕಳೂ ಕಾಣುವಂತಾಗುತ್ತದೆ.  ಕಲ್ಯಾಣ ಚಾಲುಕ್ಯರ ಕಾಲಕ್ಕೆ ತಲೆಕಟ್ಟು ಖಚಿತವಾಗುತ್ತದೆ.  ಅಲ್ಪಪ್ರಾಣಾಕ್ಷರ ದ ದಿಂದ ಪ್ರತ್ಯೇಕಿಸಲು ಇದರ ಹೊಕ್ಕಳನ್ನು ಸೀಳಿರುವುದು ವಿಜಯನಗರದ  ಅರಸರ ಕಾಲದ ಬರಹದಲ್ಲಿ ಕಾಣಬರುವ ಒಂದು ಮುಖ್ಯ ಬದಲಾವಣೆ.  ಅಲ್ಲಿಂದಲೇ ಈ ಅಕ್ಷರದ ಹೊಸಗನ್ನಡ ರೂಪ ಸಿದ್ದಿಸಿತೆಂದು ತೋರುತ್ತದೆ.
(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ